ಶಿವಮೊಗ್ಗ: ತೀರ್ಥಹಳ್ಳಿಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅದ್ದೂರಿಯಾಗಿ ನಡೆದ ಪಕ್ಷದ ಸಂಘಟನಾ ಸಭೆ ; ಡಿಕೆಶಿ ಅಭಿಮಾನಿಗಳ ಸಂಘದ ಅಧ್ಯಕ್ಷರಿಗೆ ಗೌರವಿಸಿ ಅಭಿನಂದನೆ .

    ದಿನಾಂಕ 24-01-2023 ತೀರ್ಥಹಳಿ ಗಾಂಧಿಚೌಕ ಗಜಾನನ ಕಾಂಪ್ಲೆಕ್ಸ್ ನಲ್ಲಿ ಇರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ನಡೆದ ಪಕ್ಷದ ಸಂಘಟನೆಯ ಸಭೆಯು ತೀರ್ಥಹಳಿ ನೂತನ ಕೆಪಿಸಿಸಿ ಸದಸ್ಯರು ರಾಜ್ಯ ಕಾಂಗ್ರೆಸ್ ಸಹಕಾರ ವಿಭಾಗದ ಸಂಚಾಲಕರು ಡಾ ಆರ್ ಎಂ ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹೆಚ್ .ಎಸ್. ಸುದರೇಶ್ ಅವರ ಅಧ್ಯಕ್ಷತೆಯಲ್ಲಿ ಎಐಸಿಸಿ ಪ್ರಸಾದ್ ರವರು ಮುಂಬರುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೀರ್ಥಹಳಿ ಮತ್ತು ತೀರ್ಥಹಳಿ ಗ್ರಾಮಾಂತರ ಬ್ಲಾಕ್ ಮುಖಂಡರು ಮತ್ತು ಪ್ರಮುಖರ ಸಭೆಯಲ್ಲಿ ಮಾತನಾಡಿದರು.

                 ಕಾಂಗ್ರೆಸ್ ಪಕ್ಷದ ಸಂಘಟನೆಯ ಸಭೆ

         ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಕರ್ ಮುಖಂಡರುಗಳಾದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಡಾ ಸುಂದರೇಶ್ ಹಾರೋಗೋಳಿಗೆ ಪದ್ಮನಾಭ್ ಮಟ್ಟಿನ ಮನೆ ರಾಮಚಂದ್ರ ಬ್ಯಾಡನ್ ಬೈಲ್ ಯಲ್ಲಪ ಬಂಡಿ ರಾಮಚಂದ್ರ ಅಮೀರ್ ಹಂಜಾ ಭುಜಂಗ ಪೂಜಾರಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಸುಶೀಲಾಶೆಟ್ಟಿ ಸ್ಥಾಯಿ ಸಮಿತಿಯ ಅಧ್ಯಕ್ಷರು ದತ್ತಣ್ಣ ರೆಹಮತ್ತ್ ಉಲ್ಲಾ ಆಸಾಧಿ ಕಡಿದಾಳ್ ತಾರನಾಥ್ ಮಾಜಿ ಅಧ್ಯಕ್ಷರು ಜೀನಾವಿಕ್ಟರ್ ಚೇತನ ಶ್ರೀಕಾಂತ್ ಶಶಿಕಲಾ ಮಂಜುನಾಥ್ ಶೆಟ್ಟಿ ಕಂಡಿಲ್ ರಾಘವೇಂದ್ರ ಶೆಟ್ಟಿ ಕುರುವಳಿ ನಾಗರಾಜ್ ಉಪಸ್ಥಿತಿ ಇದ್ದರು ಸಂದರ್ಭದಲ್ಲಿ ಮುಖಂಡರುಗಳು ಕಾರ್ಯಕರ್ತರಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

           ಡಿಕೆಶಿ ಅಭಿಮಾನಿಗಳ ಸಂಘದ ಅಧ್ಯಕ್ಷರುಗಳಿಗೆ  ಗೌರವಿಸಿ ಅಭಿನಂದನೆ ಸಲ್ಲಿಸುತ್ತಿರುವುದು

                  ನೂತನವಾಗಿ ಹೊಸನಗರ ಮತ್ತು ತೀರ್ಥಹಳಿ ಹಾಗೂ ನಿಧಿಗೆ  ಹೋಬಳಿಯ ಡಿಕೆಶಿ ಅಭಿಮಾನಿಗಳ ಸಂಘಕ್ಕೆ ಅಧ್ಯಕ್ಷರುಗಳಾಗಿ ಆಯ್ಕೆಯಾಗಿರುವ ಯಡೂರು ಕೌರಿ ವಿಶು ಮೇಳಿಗೆ ನಾಗೇಶ್ ಗಾಜನೂರು ಸುದೀಪ್ ಗೌಡರನ್ನು ಗೌರವಿಸಿ ಅಭಿನಂದಿಸಲಾಯಿತು.

Post a Comment

Previous Post Next Post