ಶಿವಮೊಗ್ಗ: ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಆನಂದ ಹರಟೆ ಮೇಲೆ ಇಬ್ಬರು ದುಷ್ಕರ್ಮಿಗಳಿಂದ ಭೀಕರ ಹಲ್ಲೆ

 

ಸಾಗರ ತಾಲೂಕಿನ ಆನಂದಪುರ ಸಮೀಪದ ಹೊಸುರು ಗ್ರಾಮ ಪಂಚಾಯಿತಿ ಸದಸ್ಯ ಆನಂದ ಹರಟೆ ಮೇಲೆ ಹಲ್ಲೆಯಾಗಿದೆ. ಆನಂದ್ ಹರಟೆಯವರು ಸಾಗರದಿಂದ ಐಗಿನಬೈಲಿನ ತಮ್ಮ ಮನೆಗೆ ತೆರಳುತ್ತಿದ್ದಾಗ  ಖಾಸಗಿ ಬಸ್ ಚಿಪ್ಪಳಿ ಬಳಿ ತಮ್ಮ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದಿದ್ದು ಯಾರು ಎಂದು ನೋಡಲು ಆನಂದ್  ಹರಟೆ ಅವರು ಕಾರಿನಿಂದ ಇಳಿಯುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಸ್ಕೂಟಿಯಲ್ಲಿ ಬಂದು ತಕ್ಷಣಾ ಟ್ಯೂಬ್ ಲೈಟ್ ನ ಪಟ್ಟಿಗಳಿಂದ ಆನಂದ್ ಹರಟೆ ಅವರ ಕಾಲು ಹಾಗೂ ತಲೆಗೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಖಾಸಗಿ ಬಸ್ ಒಂದು ತಮ್ಮ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ನಜ್ಜುಗುಜ್ಜಾಗಿದೆ ಹಾಗೂ ಉದ್ದೇಶಪೂರ್ವಕವಾಗಿ ನನ್ನ ಮೇಲೆ ಹಲ್ಲೆ ಮಾಡಬೇಕೆಂದು ಈ ರೀತಿ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರ್ತೆ ಇವರ ಮೇಲೆ ಪೊಲೀಸ್ ಇಲಾಖೆ ತಕ್ಷಣಾ ಕ್ರಮ ಕೈಗೊಂಡು ಅವರನ್ನು ಬಂಡಿಸಬೇಕೆಂದು ಕೂಡ ಆಗ್ರಹಿಸಿದ್ದಾರೆ.

ಆನಂದ ಹರಟೆ ಹಲ್ಲೆಗೊಳಗಾದ ವ್ಯಕ್ತಿ

ಗ್ರಾಮ ಪಂಚಾಯತಿ ಸದಸ್ಯ ಆನಂದ ಹರಟೆ ಸಾಗರದ ಉಪವಿಭಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕೈ ಹಾಗೂ ಕಾಲಿಗೆ ತೀವ್ರವಾದ ಗಾಯವಾಗಿದೆ.

Post a Comment

Previous Post Next Post