ಸುರತ್ಕಲ್ ವೃತ್ತಕ್ಕೆ ವೀರ ಸಾವರ್ಕರ್ ಹೆಸರಿಡುವುದು ಖಚಿತ : ಶಾಸಕ ಡಾ.ಭರತ್ ಶೆಟ್ಟಿ

ಸುರತ್ಕಲ್‌: ಮಂಗಳೂರು ನಗರದ ಹೊರವಲಯದಲ್ಲಿರುವ ಸುರತ್ಕಲ್ ನ ವೃತ್ತಕ್ಕೆ ವೀರ ಸಾವರ್ಕರ್ ಅವರ ಹೆಸರಿಡುವುದು ಖಚಿತ ಎಂದು ಶಾಸಕ ಡಾ. ವೈ. ಭರತ್‌ ಶೆಟ್ಟಿ ಅವರು ಸ್ಪಷ್ಟಪಡಿಸಿದ್ದಾರೆ.

ಶಾಸಕ ಡಾ. ವೈ. ಭರತ್‌ ಶೆಟ್ಟಿ

       ಸುರತ್ಕಲ್‌ ನಲ್ಲಿ ಐದು ಕೋಟಿ ರೂ. ವೆಚ್ಚದ ಜಂಕ್ಷನ್‌ ಅಭಿವೃದ್ಧಿಗೆ ಬುಧವಾರ ಶಿಲಾನ್ಯಾಸ ನಡೆಸಿ ಅವರು ಮಾತನಾಡಿದರು. ಸುರತ್ಕಲ್‌ ವೃತ್ತಕ್ಕೆ ವೀರ ಸಾವರ್ಕರ್‌ ಹೆಸರಿಡುವ ಬಗ್ಗೆ ಪಾಲಿಕೆ ಮಟ್ಟದಲ್ಲಿಆಗಬೇಕಾಗಿದ್ದ ಕೆಲಸಗಳು ಪೂರ್ಣವಾಗಿದ್ದು ಕಡತ ಈಗ ಸರಕಾರದ ಕೈಯಲ್ಲಿದೆ ಎಂದು ತಿಳಿಸಿದರು.
     ಇದೇವೇಳೆ ಸುರತ್ಕಲ್‌ ಮಾರ್ಕೆಟ್‌ ವಿಳಂಬಕ್ಕೆ ಹಿಂದಿನ ಸರಕಾರ ಅರ್ಧಂಬರ್ಧ ಸಿದ್ಧತೆ ನಡೆಸಿ ಶಿಲಾನ್ಯಾಸ ನಡೆಸಿರುವುದು ಕಾರಣ ಎಂದು ಸಚಿವ ಬೈರತಿ ಬಸವರಾಜ್‌ ಬೆಳಗಾವಿ ಅಧಿವೇಶನದಲ್ಲಿ ನೀಡಿದ ಹೇಳಿಕೆ ಸುಳ್ಳಾಗಿದ್ದರೆ ಪ್ರತಿಪಕ್ಷ ನಾಯಕರು ಸದನದಲ್ಲಿಯೇ ಯಾಕೆ ಪ್ರಶ್ನಿಸಿಲ್ಲ. ಸರಕಾರದ ವಿರುದ್ಧ ಈಗ ನಿರಾಧಾರ ಅರೋಪ ಮಾಡುವರು ಬಹಿರಂಗ ಚರ್ಚೆಗೆ ಬರಬೇಕು ಎಂದು ಅವರು ಸವಾಲೆಸೆದರು.


Post a Comment

Previous Post Next Post