ಶಿವಮೊಗ್ಗದಲ್ಲಿ ಐಎಸ್ಐಎಸ್ ಚಟುವಟಿಕೆ ಪ್ರಕರಣ: ಮಂಗಳೂರು ವಿದ್ಯಾರ್ಥಿ ಸೇರಿ ಇಬ್ಬರು ಎನ್ಐಎ ವಶಕ್ಕೆ

 ಎನ್ಐಎ ಅಧಿಕಾರಿಗಳು ಜ.05 ರಂದು ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ ಹಾಗೂ ಬೆಂಗಳೂರು ಸೇರಿ 6 ಸ್ಥಳಗಳಲ್ಲಿ ಶೋಧಕಾರ್ಯಾಚರಣೆ ನಡೆಸಿದ್ದು ಪ್ರಕರಣದ ಸಂಬಂಧ ಓರ್ವ ವಿದ್ಯಾರ್ಥಿ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

                  ಎನ್ಐಎ

By : Rekha.M
Online Desk

ಮಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು ಜ.05 ರಂದು ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ ಹಾಗೂ ಬೆಂಗಳೂರು ಸೇರಿ 6 ಸ್ಥಳಗಳಲ್ಲಿ ಶೋಧಕಾರ್ಯಾಚರಣೆ ನಡೆಸಿದ್ದು ಪ್ರಕರಣದ ಸಂಬಂಧ ಓರ್ವ ವಿದ್ಯಾರ್ಥಿ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣ ಕಳೆದ ವರ್ಷ ಸೆ.19 ರಂದು ಶಿವಮೊಗ್ಗದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಭಾರತದಲ್ಲಿ, ನಿಷೇಧಿತ ಉಗ್ರ ಸಂಘಟನೆ ಐಎಸ್ ನ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವುದು ಹಾಗೂ ದೇಶದ ಭದ್ರತೆ, ಸಾರ್ವಭೌಮತೆಗೆ ಧಕ್ಕೆ ಉಂಟುಮಾಡುವ ಯೋಜನೆ, ಪಿತೂರಿಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು. ಬಂಧಿತ ವ್ಯಕ್ತಿಗಳನ್ನು ರೆಷಾನ್ ತಜುದ್ದೀನ್ ಶೇಖ್ (ಉಡುಪಿಯ ಬ್ರಹ್ಮಾವರದ ಶಾಂತಿನಗರದ ನಿವಾಸಿ ತಜುದ್ದೀನ್ ಶೇಖ್ ಪುತ್ರ)  ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದ ಬಶೀರ್ ಬೇಗ್ ಎಂಬಾತನ ಪುತ್ರ ಹುಜೈರ್ ಫರ್ಹಾನ್ ಬೇಗ್ ಎಂದು ಗುರುತಿಸಲಾಗಿದೆ. 

ಎನ್ಐಎ ತನಿಖೆಯಲ್ಲಿ ಆರೋಪಿ ಮಾಜ್ ಮುನೀರ್ ಎಂಬಾತ ತನ್ನ ಸಹಪಾಠಿ ಹಾಗೂ ಆಪ್ತ ರೇಶಾನ್ ತಜುದ್ದೀನ್ ಎಂಬಾತನನ್ನು ಉಗ್ರ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದ ಹಾಗೂ ರೇಶಾನ್ ತಜುದ್ದೀನ್ ಶೇಖ್, ಹುಜೈರ್ ಫರ್ಹಾನ್ ಬೇಗ್ ಐಎಸ್ಐಎಸ್ ಹ್ಯಾಂಡ್ಲರ್ ನಿಂದ ಕ್ರಿಪ್ಟೋ ವ್ಯಾಲೆಟ್ ಮೂಲಕ ಉಗ್ರ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ತಮ್ಮ ಹಿಂಸಾತ್ಮಕ ದೀರ್ಘಾವಧಿಯ ಯೋಜನೆಗಳ ಭಾಗವಾಗಿ ಈ ವ್ಯಕ್ತಿಗಳು ಮದ್ಯದ ಅಂಗಡಿಗಳು, ಗೋಡೌನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳಂತಹ ವಾಹನಗಳು ಮತ್ತು ಇತರ ಸಂಸ್ಥೆಗಳಿಗೆ ಬೆಂಕಿ ಹಚ್ಚುವುದು ಮತ್ತಿತರ ಹಿಂಸಾತ್ಮಕ ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಗುರುವಾರ ಶೋಧಕಾರ್ಯಾಚರಣೆ ನಡೆಸಿದಾಗ ಡಿಜಿಟಲ್ ಉಪಕರಣಗಳು ಹಾಗೂ ದೋಷಾರೋಪಣೆಗೆ ಪೂರಕವಾಗುವ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.


Post a Comment

Previous Post Next Post