ಶಿವಮೊಗ್ಗ:ಜಿಲ್ಲೆಯಲ್ಲಿ ಹೆಚ್ಚಿದ ಕಳ್ಳತನ ಪ್ರಕರಣ! ಬಿದರೆಯ ಮತ್ತೊಂದು ಮನೆಯ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸ್ ತನಿಖಾ ತಂಡ.

 ದಿನಾಂಕ 17-01-2023 ರಂದು ಬೆಳಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿದರೆ ಗ್ರಾಮದ ವಾಸಿಯಾದ ಶ್ರೀ ಪ್ರದೀಪ್ ರವರು ತಮ್ಮ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಭದ್ರಾತಿಗೆ ಹೋಗಿದ್ದು, ದಿನಾಂಕ 27-01-2023 ರಂದು ವಾಪಾಸ್ ಬಂದು ಮನೆಯ ಮುಂಭಾಗಿಲಿಗೆ ಹಾಕಿದ್ದ ಬೀಗವನ್ನು ತೆಗೆದು ನೋಡಿದಾಗ, ಯಾರೋ ಕಳ್ಳರು ಅಡುಗೆ ಮನೆಯ ಬಾಗಿಲಿಗೆ ಹಾಕಿದ್ದ ಚಿಲಕವನ್ನು ಮುರಿದು, ಒಳಗೆ ಬಂದು ಬೆಡ್ ರೂಂ ನ ಗಾದ್ರೇಜ್ ಬೀರುವಿನಲ್ಲಿ ಇಟ್ಟಿದ್ದ 10 ಗ್ರಾಂ ತೂಕದ ಬಂಗಾರದ ಸರ, 4.000/- ನಗದು ಹಣ ಮತ್ತು ಸ್ಮಾರ್ಟ್ ವಾಚ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ದಿನಾಂಕ 28-01-2023 ರಂದು ಗುನ್ನೆ ಸಂಖ್ಯೆ 0023/2023 ಕಲಂ 454,457,380 ಐಪಿಸಿ ರೀತ್ಯಾ ಪ್ರಕರಣ ದಾಲಲಿಸಿಕೊಳ್ಳಲಾಗಿರುತ್ತದೆ.

        ಸದರಿ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆ ಬಗ್ಗೆ ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪವಿಭಾಗ-ಬಿ ರವರ ಮೇಲ್ವೀಚಾರಣೆಯಲ್ಲಿ, ಶ್ರೀ ಅಭಯ್ ಪ್ರಕಾಶ್ ಸೋಮನಾಳ್, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಶ್ರೀ ರಮೇಶ್ ಪಿಎಸ್ ಐ ಮತ್ತು ಸಿಬ್ಬಂದಿಗಳಾದ ಚಿನ್ನ ನಾಯ್ಕ್ ಶಿವರಾಜ್ ನಾಯ್ಕ್ ಮತ್ತು ಆಂಜನೇಯ ಮಾದರ್ ರವರುಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತದೆ.

              
                ಪೊಲೀಸ್ ತನಿಖಾ ತಂಡ  ಕಳ್ಳರಿಂದ ವಶಪಡಿಸಿಕೊಂಡ ನಗದು ಹಣ ಮತ್ತು ಆಭರಣ

ಸದರಿ ತನಿಖಾ ತಂಡವು ಕೂಡಲೇ ಕಾರ್ಯ ಪ್ರೌವ್ರುತ್ತರಾಗಿ ಪ್ರಕರಣ ದಾಖಲಾದ 24 ಗಂಟೆಯ ಒಳಗಾಗಿ ಪ್ರಕರಣದ ಆರೋಪಿ ಪುನೀತ್ ಬಿನ್ ಗುರುಬಸಪ್ಪ, 19 ವರ್ಷ ಹರಳಹಳಿ ಗ್ರಾಮ, ಹೊನ್ನಾಳಿ ಜಿಲ್ಲೆ, ದಾವಣಗೆರೆ ತಾಲ್ಲೂಕು ಈತನನ್ನು ದಿನಾಂಕ29-01-2023 ರಂದು ದಸ್ತಗಿರಿ ಮಾಡಿ, ಪ್ರಕರಣಕ್ಕೆ ಸಂಬಂದಿಸಿದ ಅಂದಾಜು ಬೆಲೆ 40.000/- ರೂಗಳ 8 ಗ್ರಾಂ ತೂಕದ ಬಂಗಾರದ ಸರ, ರೂ 2800/- ರೂಗಳ ನಗದು ಹಣ ಮತ್ತು ಅಂದಾಜು ಮೌಲ್ಯ 2500/- ರೂಗಳ   FIRE BOLTT  ಕಂಪನಿಯ ಒಂದು ಸ್ಮಾರ್ಟ್ ವಾಚ್ ಅನ್ನು ಅಮಾನತ್ತು ಪಡಿಸಿಕೊಂದಿರುತ್ತಾರೆ.

    ಪ್ರಕರಣ ದಾಖಲಾದ 24 ಗಂಟೆಯ ಒಳಗಾಗಿ ಆರೋಪಿತರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ ತನಿಖಾ ತಂಡಾದ ಉತ್ತಮ ಕಾರ್ಯಾವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಶ್ಲಾಘಿಸಿ ಅಭಿನಂದಿಸಿರುತ್ತಾರೆ.

Post a Comment

Previous Post Next Post