ಸಾಗರ: ಭೀಮನಕೋಣಿ ಕೆರೆಯಲ್ಲಿ ಈಜಲು ಹೋದ ಯುವಕ ನೀರುಪಾಲು : ಮುಂದುವರಿದ ಅಗ್ನಿಶಾಮಕ ದಳದ ಕಾರ್ಯಾಚರಣೆ..

      ಸಾಗರ ತಾಲೂಕಿನ ಭೀಮನಕೋಣಿ ಕೆರೆಯಲ್ಲಿ ಈಜಲು ಹೋದ ಓರ್ವ ಯುವಕ ಮಂಗಳವಾರ ಬೆಳಗ್ಗೆ ನೀರುಪಾಲಾಗಿದ್ದಾನೆ.ಸಾಗರದ ರಾಮನಗರದ ನಿವಾಸಿಯಾಗಿರುವ, ಪಟ್ಟಣದ ಮಂಜುನಾಥ ಗಾರ್ಮೆಂಟ್ಸ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯಶವಂತ(22) ನೀರುಪಾಲಾಗಿದ್ದಾನೆ. ಯಶವಂತ ಮಂಗಳವಾರ ಬೆಳಗ್ಗೆ ತನ್ನ ಮೂವರು ಸ್ನೇಹಿತರೊಂದಿಗೆ ಭೀಮನಕೋಣಿ ಕೆರೆಗೆ ಹೋಗಿದ್ದರು. 

                                                    ನೀರುಪಾಲಾದ ಯುವಕ ಯಶವಂತ 


  ಈ ವೇಳೆ ಯಶವಂತನ ಸ್ನೇಹಿತರು ನೀರಿನಲ್ಲಿ ಈಜಲು ಇಳಿದಿದ್ದಾರೆ .ಸ್ನೇಹಿತರು ಈಜಾಡುವುದನ್ನು ನೋಡುತ್ತಿದ್ದ ಯಶವಂತನು ಈಜು ಬರದಿದ್ದರೂ ನೀರಿಗೆ ಇಳಿದಿದ್ದಾರೆ. ಈಜಲು ಬಾರದ ಕಾರಣ ಯಶವಂತನು ನೀರುಪಾಲಾಗಿದ್ದಾನೆ.ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿನೀಡಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Post a Comment

Previous Post Next Post