ಶಿವಮೊಗ್ಗ: ರಿಪ್ಪನ್ ಪೇಟೆ ಪ್ರಾರ್ಥನಾ ಮಂದಿರದ ಬಳಿ ಮದ್ಯದಂಗಡಿ ಪ್ರಾರಂಭಕ್ಕೆ ಯತ್ನ; ಸರ್ವಪಕ್ಷಗಳಿಂದ ಬೃಹತ್ ಪ್ರತಿಭಟನೆ.

  ಶಿವಮೊಗ್ಗ: ರಿಪ್ಪನ್ ಪೇಟೆ ಇಲ್ಲಿನ ಹೊಸನಗರ- ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿನ ಜುಮ್ಮಾ ಮಸೀದಿ ಮುಂಭಾಗದ  ರಾಯಲ್ ಕಂಫರ್ಟ್ ಕಟ್ಟಡದಲ್ಲಿ ಮದ್ಯದಂಗಡಿ ಆರಂಭಿಸುವ ಹುನ್ನಾರ ನಡೆಯುತ್ತಿದ್ದು ಈದನು ವಿರೋಧಿಸಿ ಇಂದು ರಿಪ್ಪನ್ ಪೇಟೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ಮತ್ತು ಸರ್ವ ಪಕ್ಷಗಳಿಂದ ಪ್ರತಿಭಟನೆ ನಡೆಸಿದರು.

        ರಿಪ್ಪನ್ ಪೇಟೆ ಹೊಸನಗರ ರಸ್ತೆಯಲ್ಲಿ ಮಸೀದಿ ಮುಂಭಾಗದಲ್ಲಿ ಬಾರ್ ಮಾಡಲು ಪ್ರಯತ್ನಿಸಿರುವ ಬಾರ್ ಮಾಲೀಕರು,                 ಅಬಕಾರಿ ಭ್ರಷ್ಠ ಜಿಲ್ಲಾಧಿಕಾರಿಗಳು, ಭ್ರಷ್ಟ ಇನ್ಸ್ಪೆಕ್ಟರ್, ವಿರುದ್ದ ಸಾರ್ವಜನಿಕರು ಮತ್ತು ಮಹಿಳೆಯರು, ಎಲ್ಲಾ ಪಕ್ಷದ                                                            ಮುಖಂಡರು ಸೇರಿ ಪ್ರತಿಭಟನೆ ಮಾಡುತ್ತಿರುವುದು.

 ಕಳೆದ ಒಂದು ವಾರದ ಹಿಂದೆ ಶಿವಮೊಗ್ಗ ಅಬಕಾರಿ ಜಿಲ್ಲಾಧಿಕಾರಿಗಳಿಗೂ ಮತ್ತು ಜಿಲ್ಲಾಧಿಕಾರಿಗಲ ಕಛೇರಿಗೆ ಪಟ್ಟಣದ ಸರ್ವಪಕ್ಷಗಳ ನಿಯೋಗ ತೆರಳಿ ಯಾವುದೇ ಕಾರಣಕ್ಕೂ ಪ್ರಾರ್ಥನಾ ಮಂದಿರದ  ಸನಿಹದಲ್ಲಿ ಸಿಎಲ್-7 ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಗಿದ್ದರೂ ಕೂಡಾ ಅಧಿಕಾರಿಗಳು ಜನಸಾಮಾನ್ಯರ ವಿರೋಧವಿದ್ದಲಿ ಅಂಗಡಿ ಆರಂಭಿಸುವುದಿಲ್ಲ ಎಂಬ ಭರವಸೆ ನೀಡಿದ್ದು ನಂತರದಲ್ಲಿ ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿಗಳು ಏಕಾಏಕಿ ಮದ್ಯದಂಗಡಿ ಪರವಾನಿಕೆ  ನೀಡುವ ಹುನ್ನಾರದಲ್ಲಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಮಸೀದಿಗೂ ರಾಯಲ್ ಕಂಫರ್ಟ್ ಕಟ್ಟಡಕ್ಕೂ ಕೇವಲ 60 ಮೀಟರ್ ಅಂತರದಲ್ಲಿದ್ದರೂ ಅಬಕಾರಿ ನಿಯಮವನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಅಂಗಡಿ ಆರಂಭಕ್ಕೆ ಹಸಿರು ನಿಶಾನೆ ತೋರಿರುವ ಕ್ರಮವನ್ನು ವಿರೋಧಿಸಿ ಇಂದು ಮುಸ್ಲಿಂ ಮಹಿಳೆಯರು ಸೇರಿದಂತೆ ಸರ್ವಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿದರು.

  ನಂತರ ಮಾದ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ರಾಜ್ಯ ಜೆಡಿಎಸ್ ಪ್ರಧಾನಕಾರ್ಯದರ್ಶಿ ಆರ್.ಎ. ಚಾಬುಸಾಬ್ ತಿಂಗಳ ಈ ಹಿಂದೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ರಾಯಲ್ ಕಂಪರ್ಟ್ ಲಾಡ್ಜ್ ಅಕ್ಕಪಕ್ಕದ ನಿವಾಸಿಗಳ ನಿಯೋಗದೊಂದಿಗೆ ಕ್ಷೇತ್ರದ ಶಾಸಕ ಎಂ. ಎಸ್. ಐ.ಎಲ್. ಅಧ್ಯಕ್ಷ ಹರತಾಳು ಹಾಲಪ್ಪನವರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಯಾವುದೇ ಕಾರಣಕ್ಕೂ ಇಲ್ಲಿ ಸಿಎಲ್-7 ಮದ್ಯದಂಗಡಿ ಆರಂಭಿಸದಂತೆ ಮನವಿ ಪತ್ರವನ್ನು ಸಲ್ಲಿಸಲಾಗಿದ್ದರೂ ಕೂಡಾ ಶಿವಮೊಗ್ಗ ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿ ಸರ್ವಾಧಿಕಾರಿ ಧೋರಣೆಯಿಂದಾಗಿ ಮದ್ಯದಂಗಡಿ ಶಿಫರಸ್ಸು ಮಾಡಿರುವ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು ಕೂಡಲೇ ಈ ಬಗ್ಗೆ ಮದ್ಯದಂಗಡಿ ಪರವಾನಿಗೆ ರದ್ದುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಅಮರಣಾಂತ ಸತ್ಯಾಗ್ರಹ ನಡೆಸುವ ಎಚ್ಚರಿಕೆಯನ್ನು ನೀಡಿದರು.

         ಮಹಿಳೆಯರು ಪ್ರತಿಭಟನೆಯಲ್ಲಿ ದಿಕ್ಕಾರ ಬೋರ್ಡ್ ಅನ್ನು ಹಿಡಿದು ಪ್ರತಿಭಟಿಸುತ್ತಿರುವುದು

ಪ್ರತಿಭಟನೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡರು ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಾರ್ ತೆರೆಯಲು ಉದ್ದೇಶಿಸಿರುವ ಕಟ್ಟಡ ಕಾನೂನುಬಾಹಿರವಾಗಿದ್ದು ಸದರಿ ಜಾಗದ ಮೂಲ ದಾಖಲಾತಿಗಳನ್ನು ನೀಡುವಂತೆ ಗ್ರಾಪಂ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಬೆಳಿಗ್ಗೆ 10 ಗಂಟೆಯಿಂದ ಪ್ರತಿಭಟನೆ ಪ್ರಾರಂಭವಾಗಿದ್ದರೂ ಪ್ರತಿಭಟನಾ ಸ್ಥಳಕ್ಕೆ 6 ಗಂಟೆಗೆ ಆಗಮಿಸಿದ ಹೊಸನಗರ ತಹಶೀಲ್ದಾರ್ ವಿ.ಎಸ್ ರಾಜೀವ್ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.

                      ಸರ್ವಪಕ್ಷಗಳ ಮುಖಂಡರು  ಪ್ರತಿಭಟನೆಯಲ್ಲಿ  ಭಾಗಿಯಾಗಿರುವುದು

ಈ ಪ್ರತಿಭಟನೆಯಲ್ಲಿ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುಳಾ ಕೆ ರಾವ್ ಉಪಾಧ್ಯಾಕ್ಷರಾದ ಮಹಾಲಕ್ಷ್ಮಿ ಅಣ್ಣಪ್ಪ, ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಮಹ್ಮದ್ ರಫಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮ ಪಂಚಾಯ್ತಿ ಸದಸ್ಯರಾದ ಆಸೀಫ್ ಬಾಷಾಸಾಬ್, ಡಿ, ಈ. ಮಧುಸೂದನ್, ಧನಲಕ್ಷ್ಮಿ, ಸಾರಾಭಿ, ವೇದಾವತಿ ಪರಮೇಶ್, ಪ್ರಕಾಶ ಪಾಲೇಕರ್, ಗಣಪತಿ ಗವಟೂರು, ಚಂದ್ರೇಶ್, ವಿವಿಧ ಪಕ್ಷ್ಗಳ ಮುಖಂಡರಾದ ಅಮೀರ್ ಹಂಜಾ, ಎಂ.ಎಂ ಪರಮೇಶ್, ಗಣೇಶ್ ಸೂಗೋಡು, ಸಂತೋಷ್ ಆಶ್ರಿತಾ, ಕುಕ್ಕಳಲೇ ಈಶ್ವರಪ್ಪ, ವಾಹಿದ್, ಮುಸ್ತಾಫ್ ಅಹಮದ್, ಮಹಮ್ಮದ್ ಶಫಿ, ಹಸನಬ್ಬ, ಕೆ. ಹೆಚ್. ಆರ್. ಮಹಮ್ಮದ್ (ಮೋಣು) ಇನ್ನಿತರ ಸಮಾಜ ಬಾಂಧವರು ಹಾಗೂ ಇತರ ರಾಜಕೀಯ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Post a Comment

Previous Post Next Post