ಶಿವಮೊಗ್ಗ: ರಿಪ್ಪನ್ ಪೇಟೆ ಸಮೀಪದ ಗರ್ತಿಕೆಯಲ್ಲಿ ಕಾರು ಹಾಗು ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರನ ಸ್ಥಿತಿ ಗಂಭೀರ.

 ರಿಪ್ಪನ್ ಪೇಟೆ ಸಮೀಪದ ಗರ್ತಿಕೆರೆಯಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ ನಡೆದಿದ್ದು. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಗರ್ತಿಕೆರೆಯ ಪೆಟ್ರೋಲ್  ಬಂಕ್ ಮುಂಭಾಗ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಕುಂಬಾರುಕೊಪ್ಪ ನಿವಾಸಿ ಶಿವಪ್ಪ (58) ಎಂಬುವವರಿಗೆ ಗಂಭೀರ ಗಾಯವಾಗಿದೆ. ಇವರನ್ನು ತೀರ್ಥಹಌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

                 ಸಂಗ್ರಹ ಚಿತ್ರ

 ರಿಪ್ಪನ್ ಪೇಟೆ ಮೂಲದ ಮಾರುತಿ ಬೀಜಾ ಕಾರು ತೀರ್ಥಹಳಿ ಕಡೆಗೆ ಸಂಚರಿಸುತ್ತಿದ್ದ ವೇಳೆ ರಸ್ತೆಗೆ ಬೈಕ್ ಅಡ್ಡ ಬಂದಿದೆ. ಆದರೂ ಬೈಕ್ ತಪ್ಪಿಸಲು ಕಾರು ಚಾಲಕ ಪ್ರಯತ್ನ ಪಟ್ಟರೂ ಆಗದೆ ಬೈಕ್ ಗೆ ಗುದ್ದಿದೆ. ಕಾರು ವೇಗವಾಗಿದ್ದರಿಂದ ರಸ್ತೆ ಬದಿಯ ಚರಂಡಿಗೆ ಉರುಳಿದೆ. ಹೀಗಾಗಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

Previous Post Next Post