ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ, ಗೂಳಿ ತಿವಿದು ಇಬ್ಬರ ದುರ್ಮರಣ

 

ಸಂಗ್ರಹ ಚಿತ್ರ

By : Rekha.M

Online Desk

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹೋರಿ ತಿವಿದು ಇಬ್ಬರು ದುರ್ಮರಣ ಹೊಂದಿದ್ದಾರೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅವಘಡಗಳಲ್ಲಿ ಈ ಅನಾಹುತ ಸಂಭವಿಸಿದೆ. ಶಿಕಾರಿಪುರ ತಾಲೂಕಿನ ಮಾಳೂರಿನಲ್ಲಿ ನಡೆದಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಂಗನಾಥ್‌ ಎಂಬವರು ಮೃತಪಟ್ಟಿದ್ದಾರೆ. ಸ್ಪರ್ಧೆ ನೋಡಲು ಹೋಗಿದ್ದಾಗ ಹೋರಿ ತಿವಿದು ಮೃತಪಟ್ಟಿದ್ದಾರೆ. ಅಲ್ಲದೆ ಮಾಳೂರಿನಲ್ಲಿ ಇನ್ನೂ ಇಬ್ಬರಿಗೆ ಗಾಯಗಳಾಗಿವೆ.

ಇದೇ ವೇಳೆ ಶಿವಮೊಗ್ಗ ತಾಲೂಕಿನ ಕೊನಗನವಳ್ಳಿ, ಶಿಕಾರಿಪುರ ತಾಲೂಕಿನ ಮಾಳೂರಿನಲ್ಲಿ ಅಲ್ಕೊಳ ನಿವಾಸಿ 32 ವರ್ಷದ ಲೋಕೇಶ್ ಮೃತಪಟ್ಟಿದ್ದಾರೆ. ಹೋರಿ ತಿವಿತದಿಂದ ಗಾಯಗೊಂಡಿದ್ದ ಆಟೋ ಚಾಲಕರಾಗಿದ್ದ ಲೋಕೇಶ್‌ ಆವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Post a Comment

Previous Post Next Post