ಶಿವಮೊಗ್ಗ: ಕಚೇರಿಯಲ್ಲೇ ಮಹಿಳೆ ನೇಣಿಗೆ ಶರಣು

      ತಾನು ಕೆಲಸ ಮಾಡುತ್ತಿರುವ ಕಚೇರಿಯಲ್ಲೇ ಮಹಿಳೆಯೋರ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆಗೆ ಆಕೆಯ ಕುಟುಂಬ ಮಹಾನಗರ ಪಾಲಿಕೆಯ ವಾಹನ ಚಾಲಕ ಕಾರಣವೆಂದು ಆರೋಪಿಸಿದೆ.

ಗಾರ್ಡನ್ ಏರಿಯಾ 3ನೇ ಕ್ರಾಸ್ ನಲ್ಲಿರುವ ಚುಂಚಾದ್ರಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದ ಅನಿತಾ(32) ಇಂದು ಎಂದಿನಂತೆ ಕೆಲಸಕ್ಕೆ ಹೋಗಿದ್ದು ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದು ಮಧ್ಯಾಹ್ನ ನೇಣು ಬಿಗಿದ ಸ್ಥಿತಯಲ್ಲಿ ಪತ್ತೆಯಾಗಿದ್ದಾಳೆ.

           
               ನೇಣಿಗೆ ಶರಣಾದ ಮಹಿಳೆ ಅನಿತಾ
      ಅನಿತಾಳಿಗೆ ರಾಮಮೂರ್ತಿಯೊಂದಿಗೆ 14 ವರ್ಷದ ಹಿಂದೆ ‌ಮದುವೆಯಾಗಿತ್ತು. ಮದುವೆಯಾಗಿ 13 ವರ್ಷದ ಮಗಳಿದ್ದಾಳೆ. ಎರಡು ವರ್ಷಗಳ ಹಿಂದೆ ರಾಮಮೂರ್ತಿ ಅಸುನೀಗಿದ್ದಾರೆ. ಮಗಳೊಂದಿಗೆ ತಾಯಿ ಮನೆಯಲ್ಲಿ ವಾಸವಾಗಿದ್ದ ಅನಿತಾ ಇಂದು ನೇಣಿಗೆ ಶರಣಾಗಿದ್ದಾಳೆ.

ಈ ನಡುವೆ ನಾಗೇಂದ್ರ ಎಂಬಾತ ಈ ಮಹಿಳೆಗೆ ಪರಿಚಯವಾಗಿದ್ದನು. ಇಬ್ಬರ ನಡುವೆ ಪ್ರೀತಿ ಪ್ರೇಮ ಅಫೈರ್ ಮೊದಲಾದವುಗಳು ಇತ್ತು ಎಂದು ಹೇಳಲಾಗುತ್ತಿದೆ. ನಾಗೇಂದ್ರನಿಗೆ ಮದುವೆಯಾಗಿತ್ತು ಎನ್ನಲಾಗಿದೆ. ಮಹಾನಗರ ಪಾಲಿಕೆಯಲ್ಲಿ ಚಾಲಕನಾಗಿದ್ದನು ಎನ್ನಲಾಗುತ್ತಿದೆ.

ಯುವತಿಯ ಕುಟುಂಬ ಈ ನಾಗೇಂದ್ರನ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಾಗಿದೆ. ಇದೇ ಸತ್ಯವಾದರೆ ಪ್ರೀತಿ, ಪ್ರೇಮ ಅಫೈರ್ ಗೆ ಜೀವಕಳೆದು ಕೊಂಡಂತಾಗುತ್ತದೆ. ಮಹಿಳೆ ಜಿಎಸ್ ಕೆಎಂ ರಸ್ತೆಯ ನಿವಾಸಿಯಾಗಿದ್ದಾರೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

           ದೊಡ್ಡಪೇಟೆ ಪೊಲೀಸ್ ಠಾಣೆ

Post a Comment

Previous Post Next Post