ಉಪ್ಪಿನಂಗಡಿ : ಟಯರ್ ಮೌಲ್ಡ್ ಡಿಸ್ಕ್ ಸಿಡಿದು ಕಾರ್ಮಿಕ ಸಾವು.

 


   ಕ್ಷಿಣ ಕನ್ನಡ :ಉಪ್ಪಿನಂಗಡಿಯ ಗಾಂಧಿ ಪಾರ್ಕಿನ ಬಳಿಯ ಇಂಡಿಯನ್  ಟಯರ್ ರಿಸೋಲಿಂಗ್ ಸಂಸ್ಥೆಯಲ್ಲಿ ಟಯರ್ ಮೌಲ್ಡ್ ಡಿಸ್ಕ್ ಸಿಡಿದು ಕಾರ್ಮಿಕ ರಾಜೇಶ್ (46) ಅವರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ.

ಮೃತ ಕಾರ್ಮಿಕ ರಾಜೇಶ್ 

   
      ಮೃತ ಕಾರ್ಮಿಕ ರಾಜೇಶ್ ಕಡಬ ತಾಲೂಕಿನ ಆಲಂಕಾರು ಗ್ರಾಮ ನಿವಾಸಿ ಎನ್ನಲಾಗಿದೆ. ಬುಧವಾರ ಟಯರ್ ಮೌಲ್ಡ್ ಡಿಸ್ಕ್ ಆಕಸ್ಮಿಕವಾಗಿ ಸಿಡಿದು ಪಕ್ಕದಲ್ಲೇ ಇದ್ದ ರಾಜೇಶ್  ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ.
   ಮೌಲ್ಡ್ ಡಿಸ್ಕ್ ಸಿಡಿತದ ಪರಿಣಾಮ  ಅಂಗಡಿಯ ಗೋಡೆ ಧ್ವಂಸವಾಗಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ  ಮೃತರ ಭಾವ ಜಯಂತ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. 


Post a Comment

Previous Post Next Post