ಶಿವಮೊಗ್ಗ : ರಸ್ತೆ ಸುರಕ್ಷತಾ ಸಪ್ತಾಹ | ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಜಾಗೃತಿ ಮೂಡಿಸಲು ಆಟೋ ಚಾಲಕರ ಜಾಥಾ.

     ದಿನಾಂಕ :17 /01 /2023 ರಂದು ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪೊಲೀಸ್ ವೃತ್ತ ನಿರೀಕ್ಷಕರು, ಸಂಚಾರ ವೃತ್ತ , ಶಿವಮೊಗ್ಗ ಅವ್ರ ನೇತೃತ್ವದಲ್ಲಿ ಶಿವಮೊಗ್ಗ ನಗರದ ಅಶೋಕ ಸರ್ಕಲ್ ನಿಂದ ಶಿವಪ್ಪನಾಯಕ ಸರ್ಕಲ್ ವರೆಗೆ ರಸ್ತೆ ಸುರಕ್ಷತೆ ಮತ್ತು ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಟೋ ಚಾಲಕರ ಜಾಥಾ ವನ್ನು ನಡೆಸಿರುತ್ತಾರೆ.ಸದರಿ ಜಾಥಾದಲ್ಲಿ ಪೊಲೀಸ್ ಉಪನಿರೀಕ್ಷಕರು, ಪೂರ್ವ ಸಂಚಾರ ಠಾಣೆ,ಪೊಲೀಸ್ ಉಪನಿರೀಕ್ಷಕರು ಪಶ್ಚಿಮ ಸಂಚಾರ ಠಾಣೆ ಮತ್ತು ಸಿಬ್ಬಂದಿಗಳು ಹಾಗೂ ಆಟೋ ಚಾಲಕರು ಭಾಗವಹಿಸಿದ್ದರು.
Post a Comment

Previous Post Next Post