ಶಿವಮೊಗ್ಗ: ಆಸ್ಪತ್ರೆಗೆ ಹೋಗುವ ಗಡಿಬಿಡಿಯಲ್ಲಿ ಬ್ಯಾಗ್​ ಕಳೆದುಕೊಂಡ ಮಹಿಳೆ/ ಸ್ಟೇಷನ್​ಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಚಾಲಕ

  ಶಿವಮೊಗ್ಗ: ದಿನಾಂಕಃ-24-01-2023 ರಂದು ತಾವರೆಕೆರೆ ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆಯ ವಾಸಿ ಮೋಸಿನ್ ಅಹಮ್ಮದ್, ಶಿವಮೊಗ್ಗ ನಗರದ ಮ್ಯಾಕ್ಸ್ ಆಸ್ಪತ್ರೆಗೆ ಆಟೋದಲ್ಲಿ ಹೋಗಿದ್ದರು. ಈ ವೇಳೆ ಆಟೋ ಇಳಿಯುವ ಸಮಯದಲ್ಲಿ ತಾವು ತಂದಿದ್ದ ಬಟ್ಟೆಯ ಬ್ಯಾಗ್ ಮತ್ತು ನಗದು ಹಣವಿದ್ದ ಪರ್ಸ್ ಅನ್ನು ಮರೆತು ಆಟೋದಲ್ಲಿಯೇ ಬಿಟ್ಟು ಇಳಿದು ಹೋಗಿದ್ದರು. 

                   ಬ್ಯಾಗ್ ಕಳೆದುಕೊಂಡ ಮಹಿಳೆ ಮತ್ತು ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಬಳಿಕ ತಾವು ಕಳೆದುಕೊಂಡ ವಸ್ತುವಿನ ಬಗ್ಗೆ ಆತಂಕಗೊಂಡಿದ್ದರು. ಆದರೆ ಅವರನ್ನು ಆಟೋದಲ್ಲಿ ಆಸ್ಪತ್ರೆಗೆ ಬಿಟ್ಟಿದ್ದ  ಚಾಲಕ ನಾಗರಾಜ್,   ತಮ್ಮ ಆಟೋದಲ್ಲಿದ್ದ ಬ್ಯಾಗ್ ಹಾಗೂ ನಗದು ಹಣವಿದ್ದ ಪರ್ಸ್ ಅನ್ನು ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ತಂದು ನೀಡಿದ್ದರು. ಇನ್ನೂ ಪೊಲೀಸರು ಮೋಸಿನ್​ ಬ್ಯಾಗ್​ ಕಳೆದುಕೊಂಡಿರುವ ವಿಚಾರ ತಿಳಿದು ಅವರನ್ನು ಕರೆಸಿ, ಆಟೋ ಚಾಲಕ ನೀಡಿದ ಬ್ಯಾಗ್​ ಅದರ ಮಾಲೀಕರಿಗೆ ನೀಡಿದ್ದಾರೆ. ಇನ್ನೂ ಬ್ಯಾಗ್​ನಲ್ಲಿ  ಪರ್ಸ್ ಮತ್ತು  8,500 ರೂಪಾಯಿ ಹಣವಿದ್ದಿತ್ತು. ಆಟೋಚಾಲಕ ನಾಗರಾಜ್ ತಮಗೆ ಸಿಕ್ಕಿದ ವಸ್ತುವನ್ನು ಹಾಗೆಯೇ ಪೊಲೀಸರಿಗೆ ತಂದುಕೊಟ್ಟು ಮಾನವೀಯತೆ ಮೆರೆದಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಯ್ತು.

ಬ್ಯಾಗ್ ಮತ್ತು ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ತೋರಿದ ಆಟೋ ಚಾಲಕರಾದ ಶ್ರೀ ನಾಗರಾಜ್ ರವರ ಉತ್ತಮ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಎಸ್​ಪಿ ಮಿಥುನ್ ಕುಮಾರ್ ಜಿ.ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

Post a Comment

Previous Post Next Post