ಶಿವಮೊಗ್ಗ:ಸಾಗರದ ಹಲವು ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ; ನಗರ ಸಭೆ ಮತ್ತು ಶಾಸಕರ ವಿರುದ್ದ ಗೋಪಾಲಕೃಷ್ಣ ಬೇಳೂರು ಹಾಗು ಹಲವರು ಸೇರಿ ಪ್ರತಿಭಟನೆ.

 ಸಾಗರ ನಗರಸಭೆಯ ಹಲವು ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಇದ್ದು, ಸಾಗರದ ಜನರು ಇದರಿಂದ ಕುಡಿಯುವ ನೀರಿಗೂ ಸಹ ಪರದಾಡುವಂತ ಪರಿಸ್ಥಿತಿ ಬಂದೊದಗಿದೆ. ಈ ಕಾರಣದಿಂದ ಸಾಗರ ನಗರದ ವಾರ್ಡ್ ಮೂರರಲ್ಲಿ ಶ್ರೀ ಗೋಪಾಲಕೃಷ್ಣ ಬೇಳೂರುರವರು ಹಾಗೂ ಮುಖಂಡರು ಮತ್ತು ಸ್ಥಳೀಯ ಜನರೊಂದಿಗೆ ನಗರಸಭೆ ಮತ್ತು ಶಾಸಕರ ವಿರುದ್ದ ಸಮರ್ಪಕವಾಗಿ ನೀರು ಬಿಡಬೇಕೆಂದು ಪ್ರತಿಭಟನೆಯನ್ನು ಕೈಗೊಂಡಿದ್ದರು.

            
                      ಗೋಪಾಲಕೃಷ್ಣ ಬೇಳೂರು ಹಾಗೂ ಮುಖಂಡರು ಪ್ರತಿಭಟಿಸುತ್ತಿರುವುದು

ಕುಡಿಯುವ ನೀರನ್ನು ಗಣಪತಿ ಕೆರೆಗೆ ಬಿಟ್ಟು ದುರ್ಬಳಕೆ ಮಾಡಿದ್ದು  ಇದರಿಂದ  ಸಾಗರ ಜನರು ಕುಡಿಯುವ ನೀರಿಗಾಗಿ ಪ್ರತಿನಿತ್ಯವು ಸಂಕಷ್ಠ ಎದುರಿಸುವಂತಾಗಿದೆ. ಈ ಎಲ್ಲ ಸಮಸ್ಯೆಗಳ ಕಾರಣದಿಂದ ಸಾಗರ ಜನರಿಗೆ ಕುಡಿಯುವ ನೀರು ಬಿಡಬೇಕೆಂದು ಪ್ರತಿಭಟನೆ ಮಾಡಿದ್ದಾರೆ.

                  
                          ವಾರ್ಡ್ ನಂಬರ್ ಮೂರರಲ್ಲಿ ಸ್ಥಳೀಯರು ಸಹ ಪ್ರತಿಭಟನೆಯಲ್ಲಿ ಭಾಗಿ.


         

Post a Comment

Previous Post Next Post