ಶಿವಮೊಗ್ಗ: ಗ್ರಾಮೀಣ ಭಾಗದಲ್ಲಿ ಕೆ.ಎಸ್.ಆರ್.ಟಿ .ಸಿ ಬಸ್ ಸೌಕರ್ಯ ಒದಗಿಸುವಂತೆ ಗ್ರಾಮಾಂತರ ಎನ್.ಎಸ್ . ಯು .ಐ ವತಿಯಿಂದ ಆಗ್ರಹ .

 ಗ್ರಾಮಿಣ ಭಾಗದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸೌಕರ್ಯ ಸರಿಯಾಗಿ ಒದಗಿಸದ ಕಾರಣ  ಶಿವಮೊಗ್ಗ ಗ್ರಾಮಾಂತರ ಎನ್.ಎಸ್.ಯು. ಐ. ವತಿಯಿಂದ  ಡಿಪೋ ಮ್ಯಾನೇಜರ್, ಕೆ.ಎಸ್. ಆರ್.ಟಿ.ಸಿ ಶಿವಮೊಗ್ಗ ಡಿಪೋಗೆ ಪತ್ರ ನೀಡುವ ಮೂಲಕ  ಶಿವಮೊಗ್ಗ ಬಸ್ ನಿಲ್ದಾಣದ ಮುಂಭಾಗದಲ್ಲಿ ಆಗ್ರಹ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ನಗರ ಇತ್ತಿಚಿನ ದಿನಗಳಲ್ಲಿ ಶೈಕ್ಷಣಿಕ ಹಬ್ ಆಗಿ ಪರಿವರ್ತನೆಗೊಳುತ್ತಿದ್ದರು ಕೆ.ಎಸ್.ಆರ್.ಟಿ.ಸಿ. ಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

               ಬಸ್ ನಿಲ್ದಾಣದ ಮುಂಬಾಗದಲ್ಲಿ ಎನ್.ಎಸ್.ಯು. ಐ ವತಿಯಿಂದ ಆಗ್ರಹ.

      ಶಿವಮೊಗ್ಗದಿಂದ ನೂರಾರು ವಿದ್ಯಾರ್ಥಿಗಳು ಶಂಕರಘಟ್ಟದ ಕುವೆಂಪು ವಿವಿಗೆ ಹೋಗುತ್ತಾರೆ. ಆದರೆ ಅಲ್ಲಿಗೆ ಒಂದು ಬಸ್ ವ್ಯವಸ್ಥೆ ಮಾತ್ರ ಇದೆ. ಶಿವಮೊಗ್ಗದ ಸುತ್ತಮುತ್ತಲ ಹಲವಾರು ಪ್ರದೇಶಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ದುಬಾರಿ ಪ್ರಯಾಣ ದರ ಭರಿಸಬೇಕಾಗುತ್ತಿದೆ. ಸರ್ಕಾರ ಗ್ರಾಮೀಣ ವಿದ್ಯರ್ಥಿಗಳಿಗೆಂದೇ ರೂಪಿಸಿರುವ ಬಸ್ ಪಾಸ್ ಸೌಲಭ್ಯ ಪವೆದುಕೊಳ್ಳಲು ಆಗುತ್ತಿಲ್ಲ.

        ಇನ್ನು ಸಾಗರ ರಸ್ತೆಯಲ್ಲಿ ಸಂಚರಿಸುವ ಬಸ್ ಗಳು ವಾಜಪೇಯಿ ಬಡಾವಣೆಯ ವಿದ್ಯಾರ್ಥಿ ನಿಲಯದ  ಬಳಿ ನಿಲುಗಡೆ ಮಾಡುತ್ತಿಲ್ಲ. ಇದರಿಂದಾಗಿ ಈ ಭಾಗದಿಂದ ಬರುವ ವಿದ್ಯರ್ಥಿಗಳು ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದು ಮತ್ತೆ ಆಟೋ ಇಲ್ಲವೇ ಖಾಸಗಿ ಬಸ್ ಗಳ ಮೂಲಕ ವಿದ್ಯರ್ಥಿ ನಿಲಯಕ್ಕೆ ಹೋಗಬೇಕಾಗಿದೆ. ಇದರಿಂದ ವಿದ್ಯರ್ಥಿಗಳಿಗೆ ಹಣ, ಸಮಯ ವ್ಯರ್ಥವಾಗುತ್ತಿದ್ದು, ತೀವ್ರ ಅನಾನುಕೂಲವಾಗುತ್ತಿದೆ.

           ಕೆ.ಎಸ್. ಆರ್.ಟಿ.ಸಿ ವತಿಯಿಂದ ಬಸ್ ವ್ಯವಸ್ಥೆ ಮಾಡುವಂತೆ ಪತ್ರ ನೀಡುವ ಮೂಲಕ                                                                                     ಆಗ್ರಹಿಸುತ್ತಿರುವುದು.

ಕೂಡಲೆ ಕೆ.ಎಸ್.ಆರ್.ಟಿ.ಸಿ ವತಿಯಿಂದ ಗ್ರಾಮೀಣ ಭಾಗದಲ್ಲಿ ವಿದ್ಯರ್ಥಿಗಳ ಬೇಡಿಕೆಗನುಗುಣವಾಗಿ ಬಸ್ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿ ನಿಲಯಗಳು, ಶಾಲಾ ಕಾಲೇಜುಗಳ ಬಳಿ ಬಸ್ ಗಳ ನಿಲುಗಡೆಗೊಳಿಸಲು ಸೂಕ್ತ ಆದೇಶ ಮಾಡಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ.  ಪರೀಕ್ಷಾ ಸಮಯ ಹತ್ತಿರವಾಗುತ್ತಿದ್ದು, ಬಸ್ ಸೌಕರ್ಯ ಸಿಗದೇ ವಿದ್ಯಾರ್ಥಿಗಳು ತೊಂದರೆಗೀಡಾಗುತ್ತಿದ್ದಾರೆ. ಕೂಡಲೇ  ಬಸ್  ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಎನ್. ಎಸ್. ಯು. ಐ. ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸುತ್ತಿದ್ದೇವೆ ಈ ಸಂದರ್ಭದಲ್ಲಿ ಎನ್.ಎಸ್. ಯು.ಐ ಜಿಲ್ಲಾದ್ಯಕ್ಷ ವಿಜಯಕುಮಾರ್, ಕಾರ್ಯಾದ್ಯಕ್ಷ ರವಿಕಾಟಿಕೆರೆ, ಗ್ರಾಮಾಂತರ ಅದ್ಯಕ್ಷ ಹರ್ಷಿತ್, ಚರಣ್, ವಿಕ್ರಂ, ರವಿ, ಅಜಯ್, ಅರಸ್, ವರುಣ್ ವಿ ಪಂಡಿತ್, ಕುಮಾರ್, ಅಶ್ವಥ್, ತೌಫಿಕ್, ಮಲಗೊಪ್ಪ ಶಿವು, ಗಿರಿ, ಮುರುಳಿ, ರೋಹನ್, ಕಿರಣ ಇನ್ನೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

                              ವಿದ್ಯಾರ್ಥಿಗಳ ಸಮಸ್ಯೆ ವ್ಯಕ್ತಪಡಿಸುತ್ತಿರುವುದು.


Post a Comment

Previous Post Next Post