ಶಿವಮೊಗ್ಗ: ನ್ಯೂ ಮಂಡ್ಲಿ ಕುರುಬರ ಪಾಳ್ಯದಲ್ಲಿ ಎರೆಡು ಗುಂಪುಗಳ ಮದ್ಯೆ ಹಳೆ ವೈಮನಸ್ಯ ; ವೈಯಕ್ತಿಕ ದ್ವೇಷಕ್ಕಾಗಿ ಹಲ್ಲೆ.

ದಿನಾಂಕ 8-01-2023 ರಂದು ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಮಂಡ್ಲಿ ಕುರುಬರ ಪಾಳ್ಯದಲ್ಲಿ ನಡೆದ ಗಲಾಟೆ ಕುರಿತಂತೆ ಗುನ್ನೆ ಸಂಖ್ಯೆ 0005/2023 ಕಲಂ 143,147,148,307,323,324,504.506 ಸಹಿತ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು, ಐಐ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ದಿನಾಂಕ 09-01-2023 ರಂದು ಪ್ರಕರಣದ ಆರೋಪಿತರ ತೋಯಿದ್ ಉರ್ ರೆಹಮಾನ್ @ ಬೈ, 19 ವರ್ಷ, ನ್ಯೂ ಮಂಡ್ಲಿ ಶಿವಮೊಗ್ಗ ಟೌನ್ ರವರುಗಳನ್ನು ದಸ್ತಗಿರಿ ಮಾಡಿರುತ್ತಾರೆ.

                    ಸಾಂದರ್ಭಿಕ ಚಿತ್ರಣ

ಸದರಿ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಈ ಹಿಂದೆ ಆರೋಪಿ ತೋಯಿದ್ ಉರ್ ರೆಹಮಾನ್ ಮತ್ತು ನೊಂದ ಬಾಲಕ ಹಾಗೂ ಆತನ ಸ್ನೇಹಿತರುಗಳ ಮಧ್ಯೆ ಗಲಾಟೆ ನಡೆದಿದ್ದು ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ, ಈ ಹಳೇ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಗಲಾಟೆ ಮಾಡಿ ಹಲ್ಲೆ ನಡೆಸಿರುವುದು ವಿಚಾರಣೆಯಲ್ಲಿ ಕಂಡುಬರುತ್ತದೆ. ಆರೋಪಿತರನ್ನು ಮಾನ್ಯ ನ್ಯಾಯಲಯದ ಮುಂದೆ ಹಾಜರಿ ಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.

Post a Comment

Previous Post Next Post