ಶಿವಮೊಗ್ಗ: ಬಿಜೆಪಿಯು ಸುಳ್ಳು ಭರವಸೆಗಳ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ; ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿಯ ಭ್ರಷ್ಟ ರಾಜಕೀಯದ ಬಗ್ಗೆ ಕಿಡಿಕಾರಿದ ಕಾಂಗ್ರೆಸ್ ಪಕ್ಷ

 ತೀರ್ಥಹಳಿ:  ಮೋದಿ ನೇತೃತ್ವದಲ್ಲಿ ಚುನಾವಣೆಯಲ್ಲಿ ಭರವಸೆ ಮತ್ತು ಘೋಷಣೆಗಳ ಮೂಲಕ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಒಂದು ಭರವಸೆಗಳನ್ನು ಈಡೇರಿಸದೆ ಸುಳ್ಳು ಭ್ರವಸೆಗಳನ್ನು ಕೊಡುವುದರ ಮೂಲಕ ಮತ್ತೆ ಮತ್ತೆ ಜನರನ್ನು ಸೆಳೆಯಬಹುದು ಎಂಬ ಅವರ ಸುಳ್ಳು ಭರವಸೆಗಳಿಗೆ ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡುತ್ತಿದ್ದಾರೆ. ಆಗಿ ನಮ್ಮ ದೇಶ ಶ್ರೀಲಂಕ ಪಾಕಿಸ್ತಾನ ಅಕ್ಕ ಪಕ್ಕದ ದೇಶಗಳನ್ನು ದೂರುವುದಕ್ಕಿಂತ ನಮ್ಮ ಆರ್ಥಿಕ ಇಲಾಖೆ ಮಾಡುತ್ತಿದೆ ಎಂದು ಸಹಕಾರಿ ವಿಭಾಗದ ಸಂಚಾಲಕರಾದ ಆರ್ ಎಂ ಮಂಜುನಾಥ ಗೌಡ ಹೇಳಿದರು.

ಪಟ್ಟಣದ ಗಾಂಧಿ ಚೌಕದಲ್ಲಿರುವ ತಮ್ಮ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು ರಾಹುಲ್ ಗಾಂಡಿಯವರು ಅತ್ಯಂತ ಯಶಸ್ವಿಯಾಗಿ ಭಾರತ್ ಜೋಡೋ ಯಾತ್ರೆಯನ್ನು ಮಾಡುತ್ತಿದ್ದಾರೆ. ಬಿಜೆಪಿಯವರು ಏನು ದೇಶವನ್ನು ವಿಂಗಡನೆ ಮಾಡುತ್ತಾ ಹೊರಟಿದ್ದಾರೋ ರಾಹುಲ್ ಗಾಂಧಿಯವರು ಅದನ್ನು ಜೋಡಿಸಬೇಕೆಂಬುದರ ಸಲುವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದುರು ಇದೇ ತಿಂಗಳ 30 ರಂದು ಆ ಪಾದಯಾತ್ರೆ ಕೊನೆಗೊಳ್ಳಲಿದೆ. 26 ರಂದು ಶ್ರೀನಗರದಲ್ಲಿ ರಾಷ್ಠ್ರಧ್ವಜವನ್ನು ಹಾರಿಸುವುದರ ಮೂಲಕ ಸಮಾರೋಪ ಸಮಾರಂಭ ಮಾಡಬೇಕೆಂದು ನಿರ್ಧರಿಸಲಾಗಿತ್ತು ಆದರೆ ಕೆಲವೊಂದು ಕಡೆ ಜಾಸ್ತಿ ಪಾದಯಾತ್ರೆಯಾದ ಕಾರಣ 30 ರಂದು ಕೊನೆಗೊಳ್ಳಲಿದೆ ಎಂದರು.

            ಸಿ ಎಲ್ ಪಿ ನಾಯಕರಾದ ಸಿದ್ದರಾಮಯ್ಯನವರು ರಾಜ್ಯದ ಡಬಲ್ ಇಂಜಿನ್ ಸರ್ಕಾರದ ವಿರುದ್ದ ಅವರ ಜನ ವಿರೋಧಿ ನೀತಿಗಳನ್ನು ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವ ನಿರ್ಮಾಣವಾಗಿದೆ. ಇದರಿಂದ ಬಿಜೆಪಿಗೆ ಗಲಿಬಿಲಿಯಾಗಿದೆ. ರಾಜ್ಯದ ಬಿಜೆಪಿ ನಾಯಕರಿಗೆ ಯಾವುದೇ ಭರವಸೆ ಉಳಿದಿಲ್ಲ. ಮತ್ತೊಮ್ಮೆ ಸರ್ಕಾರ ತರುತ್ತೇವೆ ಎಂದು ಸಚಿವ ಸಂಪುಟವನ್ನು ವಿಸ್ತರಿಸುತ್ತ ಹೋಗುತ್ತಿದ್ದಾರೆ ಎಂದರು.

         40% ಕಮಿಷನ್ ವಿಚಾರ ಕೇಳಿ ಕೇಳಿ ಬೇಜಾರು ಬಂದು ಹೋಗಿದೆ. ದಕ್ಷಿಣಕನ್ನಡದಲ್ಲಿ ದೇವಸ್ಥಾನಗಳ ಪುನರುತ್ಥಾನಕ್ಕಾಗಿ  ಗಡೆ ಮಾಡುವುದಕ್ಕಾಗಿ 20% ಕಮಿಷನ್ ಕೇಳಿದ್ದಾರೆ ಇದನ್ನು ನಾವು ಹೇಳುತ್ತಿರುವುದಲ್ಲ ಬಿಜೆಪಿಯ ವಕ್ತಾರರೇ ತಿಳಿಸಿದ್ದು. ಈ ಸರ್ಕಾರ ಬಂದು ನಿಂತಿದೆ ಎಂದರೆ ದೇವರ ಹೆಸರನ್ನ ಹೇಳಿ  ಧರ್ಮದ ಹೆಸರನ್ನು ಹೇಳಿ ಅಧಿಕಾರಕ್ಕೆ ಬರುತ್ತಾರೆ ಅಂತಹದರಲ್ಲಿ ದೇವಸ್ಥಾನದ ಅಭಿವೃದ್ದಿಗೆ ಕಮಿಷನ್ ಕೇಳುತ್ತಾರೆ ಎಂದರೆ ಯಾವ ರೀತಿ ಸರ್ಕಾರ ನಡೆಸುತ್ತಿದ್ದಾರೆ. ಆದ್ದರಿಂದ ಎಲ್ಲದಕ್ಕೂ ಕಾಂಗ್ರೆಸ್ ಪಕ್ಷವೇ ಅನಿವಾರ್ಯ ಎಂದು ತಿಳಿಸಿದರು.

ದಕ್ಷಿಣ ಕನ್ನಡದಲ್ಲಿ ಭಾನುವಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಬಿಜೆಪಿಯ ಘಟಾನುಘಟಿಗಳು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಹಾಗಾಗಿ ಬಿಜೆಪಿಯನ್ನು ದೂರ ಇಡುವ ಸಲುವಾಗಿ ಜನರು ತೀರ್ಮಾನ ತೆಗೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ಸಹ ಹೊಸ ವಾತಾವರಣ ನಿರ್ಮಾಣವಾಗಲಿದೆ. ಅಭಿವೃದ್ದಿಯ ಬಗ್ಗೆ ಮಾತನಾಡುತ್ತಾರೆ ಆದರೆ ಅಲ್ಲಲ್ಲಿ ಅಭಿವೃದ್ದಿ ಕಂಡರೂ ಕೂಡ ಅದರ ಬಹುಪಾಲು ರಾಜಕೀಯ ನಾಯಕರು ಮಂತ್ರಿಗಳ ಜೇಬು ಸೇರಿದೆ ಇವೆಲ್ಲವೂ ಕೂಡ ಒಂದು ರೀತಿ ಹೇಸಿಗೆ ತರುವ ವಾತಾವರಣ ಎಂದು ತಿಳಿಸಿದರು.

     ತೀರ್ಥಹಳಿಯ ಕಾಂಗ್ರೆಸ್ ನಲ್ಲಿ ಸಂಘಟನೆಯ ಕೊರತೆ ಇದೆ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸಂಘಟನೆ ಮಾಡುವಂತಹ ಜವಾಬ್ದಾರಿಯನ್ನು ಯಾರು ಹೊತ್ತಿದ್ದಾರೋ ಅವರು ಅದರಲ್ಲಿ ಸೋತಿದ್ದಾರೆ. ಸಂಘಟನೆಯ ಜವಾಬ್ದಾರಿ ಹೊತ್ತಿರುವ ಬ್ಲಾಕ್ ಅಧ್ಯಕ್ಷರು ಬೇರೆ ಬೇರೆಯ ಸರ್ವಾಧಿಕಾರಿ ಮನೋಭಾವ ಹೊಂದಿರುವವರನ್ನು ನಾನು ಖಂಡಿಸುತ್ತೇನೆ. ಕಾಂಗ್ರೆಸ್ ಸಾಮಾನ್ಯ ಒಬ್ಬ ಕಾರ್ಯಕರ್ತನನ್ನು ನಾವು ವಿಶ್ವಾಸಕ್ಕೆ ತೆಗೆದು ಕೆಲಸವನ್ನು ಮಾಡಿಸಿಕೊಳ್ಳಬೇಕು.

 ಕಿಮ್ಮನೆ ರತ್ನಾಕರ್ ಬಹಳ ದೊಡ್ದವರಿದ್ದಾರೆ ಅವರ ವಿಚಾರ ಈಗ ಬೇಡ. ನಾನು ಹಾಗೂ ನಮ್ಮೆಲ್ಲರ ಜೊತೆಗಿರುವವರನ್ನು ಸೇರಿಸಿಕೊಂಡು ಕಾಂಗ್ರೆಸ್ ಅನ್ನು ಸುಭದ್ರ ಪಡಿಸುವ ಭದ್ರವಾಗಿ ಕಟ್ಟುವ ಕೆಲಸವನ್ನು ನನಗೆ ರಾಜ್ಯಮಟ್ಟದಲ್ಲೇ ಕೊತ್ತಿದ್ದಾರೆ. ಸಹಕಾರಿ ಕ್ಷೇತ್ರ ಮತ್ತು ನಿಮಗೆ ಎಲ್ಲೆಲ್ಲಿ ಕೆಲಸ ಮಾಡಲು ಆಗುತ್ತದೋ ಅಲ್ಲೆಲ್ಲ ಕೆಲಸ ಮಾಡಿ ಎಂದು ತೀಳಿಸಿದ್ದಾರೆ. ಕಾಂಗ್ರೆಸ್ ಉಳಿದಿರುವ ಕೆಲಸವನ್ನು ನಾವು ಮಾಡುತ್ತೇವೆ. ನಾನು ಡಿಕೆ ಶಿವಕುಮಾರ್ ಅವರ ಆತ್ಮೀಯನಾಗಿ ಅವರ ಸಿದ್ದಾಂತದ ಪ್ರತಿಪಾದಕನಾಗಿ ವ್ಯಕ್ತಿ ಪೀಜೆಯಲ್ಲ ಕಾಂಗ್ರೆಸ್ ಪಕ್ಷದ ಪೂಜೆಯಾಗಬೇಕು. ಎಲ್ಲದಕ್ಕಿಂತಲೂ ನನಗಿಂತಲೂ ದೊಡ್ದದು ಕಾಂಗ್ರೆಸ್. ಕಾಂಗ್ರೆಸ್ ಗಾಗಿ ನಾವು ಇರಬೇಕು. ನನ್ನ ಜೊತೆಗಿದ್ದವರನ್ನು ಜೆಡಿಎಸ್ ನಿಂದ ಬಂದವರಾಗಲಿ ಅಥವಾ ಕೆಜೆಪಿ ಪಕ್ಷದಿಂದ ಬಂದವರಾಗಲಿ, ಯಾರನ್ನು ಕೂಡ ಬೇರೆ ಕಡೆ ಹೋಗಲು ನಾನು ಬಿಡುವುದಿಲ್ಲ. ಮೂಲ ಕಾಂಗ್ರೆಸ್ ನವರಿಗೂ ಕೂದ ನಾನು ಮನವಿ ಮಾಡುತ್ತೇನೆ ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಟ್ಟು ಹೋಗಬೇಡಿ ಎಂದು ತಿಳಿಸಿದರು.

ಕಿಮ್ಮನೆ ರತ್ನಾಕರ ಅವರಿಗೆ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಆರ್ ಎಂ ಎಂ ನಮ್ಮ ಮಾಜಿ ಸಚಿವರು ಬಹಳ ಪ್ರಾಮಾಣಿಕರು ಸತ್ಯಹರಿಶ್ಚಂದ್ರನನ್ನು ಬಿಟ್ಟರೆ ಅವರೆ ನೆಕ್ಸ್ಟ್ ಬೇರೆ ಇಲ್ಲ. ತನಿಖೆ ಮಾಡಲು ಹೇಳಿ ಅವರ ಕೈಯಲ್ಲಿ ಎಲ್ಲವೂ ಇದೆಯಲ್ಲ ಪುನಃ ತನಿಖೆ ಮಾಡಲು ಹೇಳಿ ನಿಮ್ಮ ಕೈಯಲ್ಲಿ ಅಧಿಕಾರ ಇದೆಯಲ್ಲ. ಹೊರಗೆ ಜ್ಞಾನೇಂದ್ರ ಅವರ ಬಳಿ ನಾನು ಮನವಿ ಮಾಡುತ್ತೇನೆ. ಪಿಎಸ್ಐ ಹಗರಣ ಸ್ಯಾಂಟ್ರೋ ರವಿ ಕೇಸ್ ನಿಮ್ಮ ಕಾಲದಲ್ಲಿ ಆಗಿದೆ. ಇವೆಲ್ಲ ಬೇಡ ನೀನು ಬಹಳ ಪ್ರಾಮಾಣಿಕರು ಅಲ್ಲವೇ ನೀವು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ಅಂತಹ ಕೆಲ್ಸ ಮಾಡಬಾರದು ಕಾನೂನಿಗೆ ಅದು ಅಪರಾಧ ಗೃಹ ಸಚಿವರಾಗಿ ಅದನ್ನೆಲ್ಲ ಹೇಳಬಾರದು ನೀವು ತನಿಖೆ ಮಾಡಿಸಿ ಈಗ ನಿಮ್ಮದೇ ಲೋಕಯುಕ್ತ ಇದೆ. ತನಿಖೆ ಮಾಡಿಸಿ ಎಂದರು.

      ಸುದ್ದುಗೋಷ್ಠಿಯಲ್ಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರುಗಳಾದ ಡಾ ಸುಂದರೇಶ್ ಹಾರೋಗೊಳೊಗೆ, ಪದ್ಮನಾಭ್ ಬ್ಯಾಡ್ಲುಬೈಲ್ ಯಲ್ಲಪ್ಪ ಪಟ್ಟಣ ಪಂಚಾಯತ ಅಧ್ಯಕ್ಷರು ಸುಶೀಲಾಶೆಟ್ಟಿ, ರೆಹಮತ್ತ್ ಉಲ್ಲಾ ಆಸಾದಿ ಕಟ್ಲೆಹಕ್ಲು ಕಿರಣ್ ಜೀನಾ ವಿಕ್ಟರ್ ರಾಘವೇಂದ್ರ ಶೆಟ್ಟಿ ಕುರುವಳಿ ನಾಗರಾಜ್ ನಾಗರಾಜ್ ರಫೀ ಬೆಟ್ಟಮಕ್ಕಿ ಪ್ರಮುಖರು ಇದ್ದರು.

Post a Comment

Previous Post Next Post