ಶಿವಮೊಗ್ಗ: ಸಾಗರ ಭಜರಂಗದಳ ಕಾರ್ಯಕರ್ತನ ಸುನಿಲ್ ಹತ್ಯೆಗೆ ಯತ್ನ ; ಕ್ಷಣಾರ್ಧದಲ್ಲಿ ಆರೋಪಿ ಸಮೀರ್ ನನ್ನು ವಶಕ್ಕೆ ಪಡೆದ ಜಿಲ್ಲಾ ರಕ್ಷಣಾಧಿಕಾರಿಗಳ ತಂಡ.

 ಸಾಗರ ಭಜರಂಗದಳದ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ ವಿಚಾರದಲ್ಲಿ ಸಾಗರ ಟೌನ್ ಠಾಣೆಯಲ್ಲಿ ನಿನ್ನೆ ಘಟನೆ ಕುರಿತಂತೆ ಎಫ್ ಐ ಆರ್ ದಾಖಲಾಗಿದೆ. ಸಾಗರದ ಸಮೀರ್ ಎ1 ಆರೋಪಿ ಎಂದು ತೋರಿಸಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಉಳಿದಂತೆ ಫಾರುಕ್ ಹಾಗೂ ನಾಲ್ಕೈದು ಜನರ ವಿರುಧ್ಧ ಸಹ ಎಫ್ ಐ ಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 307,149,506,504 ಅಡಿ ಕೇಸ್ ದಾಖಲಾಗಿದೆ. ಜೀವ ಬೇದರಿಕೆ, ಕೊಲೆ ಯತ್ನ ಸಂಬಂಧ ಕೇಸ್ ದಾಖಲಾಗಿದೆ.

                  ಆರೋಪಿ ಸಮೀರ್

ಈಗಾಗಲೇ ಆರೋಪಿಯನ್ನು ಶಿವಮೊಗ್ಗದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ನಿನ್ನೆ ಮೂರು ತಂಡಗಳಾಗಿ ಜಿಲ್ಲಾ ರಕ್ಷಣಾಧಿಕಾರಿಗಳು ತಂಡ ರಚನೆ ಮಾಡಲಾಗಿದ್ದು ವಿಶೇಷ ತಂಡದಿಂದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ

                 ಸಾಗರ


Post a Comment

Previous Post Next Post