ಶಿವಮೊಗ್ಗ: ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ ಆವರಣದಲ್ಲಿ ಹೆಚ್ಚಿದ ಕಾನೂನು ಬಾಹಿರ ಉತ್ಪನ್ನಗಳ ಮಾರಾಟ ; ಪೊಲೀಸ್ ಇಲಾಖೆಯಿಂದ ಅಂಗಡಿಗಳ ಮೇಲೆ ದಾಳಿ

           ಪೊಲೀಸ್ ಇಲಾಖೆಯಿಂದ  ಶಾಲಾ ಕಾಲೇಜುಗಳ ಆವರಣದಲ್ಲಿ ಕಾನೂನು ಬಾಹಿರ  ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ 
                                                                          ಶೋಧ ಕಾರ್ಯಾಚರಣೆ

       ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ ಆವರಣದಿಂದ 100 ಗಜಗಳ ವ್ಯಾಪ್ತಿಯಲ್ಲಿ ಕಾನೂನು ಬಾಹೀರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಪೆಟ್ಟಿ ಅಂಗಡಿ, ಜೆರಾಕ್ಸ್ ಅಂಗಡಿ ಮತ್ತು ಬೇಕರಿಗಳ ಮೇಲೆ ಮತ್ತು ಸಾರ್ವಜನಿಕವಾಗಿ ಉಪಟಳ ( public nuisance)  ನೀಡುತ್ತಿದ್ದವರ ಮೇಲೆ ದಿನಾಂಕ: 25-01-2023 ರಂದು ವಿಶೇಷ ಕಾರ್ಯಾಚರಣೆ ನಡೆಸಿದೆ.

                                       ಶೋಧ ಕಾರ್ಯಾಚರಣೆಯಲ್ಲಿ ದೊರೆತ ತಂಬಾಕು ಉತ್ಪನ್ನಗಳು

      ಶಿವಮೊಗ್ಗ-ಎ ಉಪ ವಿಭಾಗದ 14 ಶಾಲಾ ಕಾಲೇಜುಗಳ ಹತ್ತಿರ 110 ಕೋಟ್ಪಾ ಸ್ಥಳ ದಂಡ ಪ್ರಕರಣಗಳು,02 ಕೋಟ್ಪಾ ಕಾಯ್ದೆಯಡಿ ಎಫ್ ಐ ಆರ್ ಗಳು ಮತ್ತು 02 ಲಘು ಪ್ರಕರಣಗಳು, ಶಿವಮೊಗ್ಗ-ಬಿ ಉಪ ವಿಭಾಗದ 15 ಶಾಲಾ ಕಾಲೇಜುಗಳ ಹತ್ತಿರ 146 ಕೋಟ್ಪಾ ಸ್ಥಳ ದಂಡ ಪ್ರಕರಣಗಳು, ಶಿಕಾರಿಪುರ ಉಪ ವಿಭಾಗದ 06 ಶಾಲಾ ಕಾಲೇಜುಗಳ ಹತ್ತಿರ 41 ಕೋಟ್ಪಾ ಸ್ಥಳಾ ದಂಡ ಪ್ರಕರಣಗಳು ಮತ್ತು 97 ಲಘು ಪ್ರಕರಣಗಳು, ಸಾಗರ ಉಪ ವಿಭಾಗದ 05 ಶಾಲಾ ಕಾಲೇಜುಗಳ ಹತ್ತಿರ 29 ಕೋಟ್ಪಾ ಸ್ಥಳ ದಂಡ ಪ್ರಕರಣಗಳು, ಭದ್ರಾವತಿ ಉಪ ವಿಭಾಗ 17 ಶಾಲಾ ಕಾಲೇಜುಗಳ ಹತ್ತಿರ 136 ಕೋಟ್ಪಾ ಸ್ಥಳ ದಂದ ಪ್ರಕರಣಗಳು,05 ಕೋಟ್ಪಾ ಕಾಯ್ದೆಯಡಿ ಎಫ್ ಐ ಆರ್ ಗಳು ಮತ್ತು ತೀರ್ಥಹಳಿ ಉಪ ವಿಭಾಗದ 07 ಶಾಲಾ ಕಾಲೇಜುಗಳ ಹತ್ತಿರ 95 ಕೋಟ್ಪಾ ಸ್ಥಳ ದಂಡ ಪ್ರಕರಣಗಳು  ಮತ್ತು 53 ಲಘು ಪ್ರಕರಣಗಳು ಸೇರಿ, ಜಿಲ್ಲೆಯಾದ್ಯಂತ ಒಟ್ಟು 64 ಶಾಲಾ ಕಾಲೇಜುಗಳ ಹತ್ತಿರ ಒಟ್ಟು 557 ಕೋಟ್ಪಾ ಪ್ರಕರಣಗಳು,07 ಕೋಟ್ಪಾ ಕಾಯ್ದೆಯಡಿ ಎಫ್ ಐ ಆರ್ ಗಳು ಮತ್ತು 182 ಲಘು ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.

. ಕಾಲೇಜು ಆವರಣಗಳ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವ ಮಾಲಿಕರು


Post a Comment

Previous Post Next Post