ಶಿವಮೊಗ್ಗ: ವಿದ್ಯುತ್ ಪಡೆಯುವ ದುರುದುದ್ದೇಶದಿಂದ ಸಾಗರದ ಹೆಗ್ಗೋಡು ಗ್ರಾಮಪಂಚಾಯಿತಿಯಾ ಪಿ ಡಿ ಓ ಸಹಿ, ಲೆಟರ್ ಪ್ಯಾಡ್, ಸೀಲ್ ನಕಲಿ ! ಪೊಲೀಸ್ ಠಾಣೆಯಲ್ಲಿ ಕಿಲಾಡಿ ಮಹಿಳೆಯ ವಿರುದ್ಧ ದೂರು ದಾಖಲು.

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಹೆಗ್ಗೋಡು ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗಳ ನಕಲಿ ಸಹಿ, ಗ್ರಾಮ ಪಂಚಾಯಿತಿಯ ನಕಲಿ ಲೆಟರ್ ಪ್ಯಾಡ್, ನಕಲಿ ಸೀಲ್ ಬಳಸಿ ವಿದ್ಯುತ್ ಸಂಪರ್ಕ ಪಡೆಯಲು  ದುರ್ಬಳಕೆ ಮಾಡಿಕೊಳ್ಳುವುದರ ಮೂಲಕ ಒಂದು ದೊಡ್ಡ ಕಾನೂನು ಬಾಹಿರ ಚಟುವಟಿಕೆಯನ್ನು ಸವಿತಾ ಕೋಂ ಪರಶುರಾಮ್ ರವರು ಮಾಡಿದ್ದಾರೆ.

               
                                              ಪ್ರಕರಣಕ್ಕೆ ಸಂಬಂದಪಟ್ಟ ಚಿತ್ರಣ

ಈ ರೀತಿ ಒಂದು ಅಪರಾಧ ಮಾಡುವ ಮೂಲಕ ವಿದ್ಯುತ್ ಸಂಪರ್ಕ ಪಡೆಯುವ ದುರುದುದ್ದೇಶದಿಂದ ಮೆಸ್ಕಾಂ ಕಛೇರಿಗೆ ನಿರಾಪೇಕ್ಷಣಾ ಪತ್ರ ಒದಗಿಸಿ ಐದ್ಯುತ್ ಸಂಪರ್ಕ ಪಡೆದಿರುವ ಬಗ್ಗೆ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಲಿಕಿತ ದೂರು ಸಲ್ಲಿಸುವ ಮುಖಾಂತರ ಖೊಟ್ಟಿ ದಾಖಲೆಯನ್ನು ಸೃಷ್ಠಿಸಿರುವ ಸವಿತಾ ಕೋಂ ಪರಶುರಾಮ್ ವಿರುದ್ದ ತನಿಖೆ ನಡೆಸುವಂತೆ ಹೆಗ್ಗೋಡು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ದೂರು ಸಲ್ಲಿಸಿದ್ದಾರೆ. ಈ ದೂರಿನ ಅನ್ವಯ ಸಾಗರ ಗ್ರಾಮಾಂತರ ಪೊಲೀಸ್ ಅಡಿಕಾರಿಗಳು ತನಿಖೆ ಕೈಗೊಂಡಿದ್ದಾರೆ. 

                    
                                                    ದೂರು ನೀಡಿರುವ ವರದಿ


Post a Comment

Previous Post Next Post