ಶಿವಮೊಗ್ಗ: ಸಾಗರ ಶ್ರೀ ಮಾರಿಕಾಂಬ ಜಾತ್ರಾ ಮಹೊತ್ಸವದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಡೆಸಲು ಜಾಗದ ಟೆಂಡರ್ ನ ಷರತ್ತುಗಳು ಅನ್ವಯ; ಶ್ರೀ ಮಾರಿಕಾಂಬ ಜಾತ್ರಾ ಸಮಿತಿ.

 ದಿನಾಂಕ 07-02-2023 ರಿಂದ ಪ್ರಾರಂಭವಾಗುವ ಶ್ರೀ ಮಾರಿಕಾಂಬ ಜಾತ್ರೆಯಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಡೆಸಲು ನಿಗದಿತ ಜಾಗದ ಟೆಂಡರ್ ಅನ್ನು ಕರೆಯಲಾಗಿದ್ದು ಷರತ್ತುಗಳು ಈ ಕೆಳಗಿನಂತಿವೆ.

                                                                    ಸಾಂದರ್ಭಿಕ ಚಿತ್ರಣ

1. ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವವರು 2000/- ರೂ ಗಳನ್ನು ಸಂದಾಯಮಾಡಿ ಅರ್ಜಿ ಪಾರಂ ಅನ್ನು ಪಡೆಯತಕ್ಕದ್ದು ಈ ಮೊತ್ತವನ್ನು ಹಿಂತಿರುಗಿಸಲಾಗುವುದಿಲ್ಲ.

2. ಟೆಂಡರ್ ನಲ್ಲಿ ಬಾಗವಹಿಸುವವರು 5.00.000/- (ಐದು ಲಕ್ಷ ರೂಪಾಯಿಗಳು ಮಾತ್ರ) ಗಳನ್ನು  EMD ಇಡತಕ್ಕದ್ದು, ಯಶಸ್ವಿ ಬಿಡ್ಡುದಾರರನ್ನು ಹೊರತು ಪಡಿಸಿ ಉಳಿದವರಿಗೆ ಠೇವಣಿ ಮೊತ್ತವನ್ನು ಹಿಂತಿರುಗಿಸಲಾಗುವುದು.

3. ಸಮಿತಿಯು ನಿಗದಿಪಡಿಸಿದ ಜಾಗವನ್ನು ಹೊರತುಪಡಿಸಿ ಉಳಿದ ಜಾಗವನ್ನು ಬಳಸುವಂತಿಲ್ಲ.

4. ಯಶಸ್ವಿ ಟೆಂಡರ್ ದಾರರು ಟೆಂಡರ್ ನ ಪೂರ್ಣ ಮೊತ್ತವನ್ನು 48 ಗಂಟೆಯ ಒಳಗಾಗಿ ಸಮಿತಿಗೆ ಬರಿಸತಕ್ಕದ್ದು, ತಪ್ಪಿದ್ದಲ್ಲಿ ನಿಮ್ಮ  ಟೆಂಡರ್ ಅನ್ನು ರದ್ದುಗೊಳಿಸಿ ಠೇವಣಿ ಮೊತ್ತವನ್ನು  ಮುಟ್ಟುಗೋಲು ಹಾಕಲಾಗುವುದು. ಹಾಗೂ ಎರಡನೇ ಹೆಚ್ಚುವರಿ ಬಿಡ್ಡು ಮೊತ್ತವನ್ನು ನಮೂದಿಸಿದವರಿಗೆ ಕೊಡಲಾಗುವುದು. ಇವರು ಹಣವನ್ನು ಕಟ್ಟದಿದ್ದಲ್ಲಿ ಪುನಃ ಟೆಂಡರ್ ಕರೆಯಲಾಗುವುದು.

5. ಯಶಸ್ವಿ ಟೆಂಡರ್ ದಾರರು ನಿಮಗೆ ಬೇಕಾದ ವಿದ್ಯುತ್ ಶಕ್ತಿಯನ್ನು ನೀವೇ ಬರಿಸಿಕೊಳ್ಳತಕ್ಕದ್ದು.

6. ಯಶಸ್ವಿ ಟೆಂಡರ್ ದಾರರು ನಿಮಗೆ ನಿಗದಿ ಪಡಿಸಿದ ಜಾಗದಲ್ಲಿ ಏನೇ ಅವಘಡಗಳು ಸಂಭವಿಸಿದರೇ ಇದಕ್ಕೆ ಸಂಪೂರ್ಣ ಜವಾಬ್ದಾರಿ ನೀವೇ ಆಗಿರುತ್ತೀರಿ.

7. ಯಶಸ್ವಿ ಟೆಂಡರ್ ದಾರರು ನಿಮ್ಮ ಸ್ವಂತ ಕರ್ಚಿನಲ್ಲಿ ಕಡ್ಡಾಯವಾಗಿ ಜೀವ ವಿಮೆ ಮಾಡಿಸತಕ್ಕದ್ದು.

8. ಯಶಸ್ವಿ ಟೆಂಡರ್ ದಾರರು ವಿವಿಧ ಇಲಾಖೆಗಳ ನಿರಾಕ್ಷೇಪಣೆ ಪತ್ರಗಳನ್ನು ನೀವೇ ಮಾಡಿಸಿಕೊಳ್ಳತಕ್ಕದ್ದು.

9. ನಾವು ನಿಗದಿಪಡಿಸಿದ ಸ್ಥಳದಲ್ಲಿ ಜೂಜು, ಜುಗಾರಿ, ಪಿನ್ ಬೋರ್ಡ್ ಗುಂಡಾಲಿ, ಹಾಗೂ ಇನ್ನಿತರೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.

10. ನಾವು ನಿಗದಿ ಪಡಿಸಿದ ಪ್ರವೇಶ ಶುಲ್ಕವನ್ನು ಪ್ರತಿ ಆಟಕ್ಕೆ ರೂ,50/- ನಿಗದಿಪಡಿಸತಕ್ಕದ್ದು.

11. ಯಶಸ್ವಿ ಟೆಂಡರ್ ದಾರರು ಫುಡ್ ಕೋರ್ಟ್ ಹೊರತು ಪಡಿಸಿ ಯಾವುದೇ ಅಂಗಡಿ ಮುಂಗಟ್ಟು ಹಾಕುವಂತಿಲ್ಲ.

12. ಯಶಸ್ವಿ ಟೆಂಡರ್ ದಾರರು ಅಮ್ಯೂಸ್ ಮೆಂಟ್ ಪಾರ್ಕ ನಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ ಹಾಗೂ ಪಾರ್ಕ್ ನ ಸ್ವಚ್ಛತೆಯನ್ನು ಕಾಪಾಡಿಕೊಳ್ಳತಕ್ಕದ್ದು.

13. ಅಮ್ಯೂಸ್ ಮೆಂಟ್ ಟೆಂಡರ್ ಸಲ್ಲಿಸುವವರು ರೂ. 65.00.000.00 ಬಿಡ್ ಮಾಡತಕ್ಕದ್ದು.

14. ಯಶಸ್ವಿ ಟೆಂಡರ್ ದಾರರ ಟೆಂಡರ್ ದಾರರ ಟೆಂಡರ್ ನ್ನು ಒಪ್ಪುವ ಹಾಗು ತಿರಸ್ಕರಿಸುವ ಹಕ್ಕು ಸಮಿತಿಯದ್ದಾಗಿರುತ್ತದೆ.

                                          ಅಮ್ಯೂಸ್ ಮೆಂಟ್ ಪಾರ್ಕ್ ಜಾಗದ  ಟೆಂಡರ್ ನ ನಿಬಂದೆನೆಗಳು

ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷರು ಶ್ರೀ.ಕೆ.ಎಸ್. ನಾಗೇಂದ್ರ, ಶ್ರೀ ಬಿ. ಗಿರಿದರ್ ರಾವ್, ಪ್ರಧಾನ ಕಾರ್ಯದರ್ಶಿ, ಶ್ರೀ ನಾಗೇಂದ್ರ ಎಸ್. ಕುಮಟ ಕೋಶಾಧ್ಯಕ್ಷರು, ಶ್ರೀ ತಾರಾ ಮೂರ್ತಿ, ಸಂಚಾಲಕರು, ಶ್ರೀ ಬಾಲಕೃಷ್ಣ ಗುಳೇದ, ಶ್ರೀ ಬಸವರಾಜ್, ಶ್ರೀ ಮಂಜುನಾಥ್ ಸಹ ಸಂಚಾಲಕರು.     

                                                              ಮಾರಿಕಾಂಬ ದೇವಸ್ಥಾನ




                                                              















                                      


Post a Comment

Previous Post Next Post